ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಪ್ರತಿಯೊಂದು ಸಂಘರ್ಷಕ್ಕೂ ಇತಿಹಾಸ ಕೊಟ್ಟಿರುವ ಹೆಸರು ಯುದ್ಧ. ನಿಯಮಗಳು ಮುರಿದಾಗ ಯುದ್ಧನಾದ ಮೊಳಗುತ್ತದೆ. ನಮ್ಮ ದೇಹದೊಳಗೂ ಅಂತಹದ್ದೇ ಒಂದು ಸಂಘರ್ಷ ಜರುಗುತ್ತದೆ. ನಮ್ಮ ಜೀವಕೋಶಗಳೇ ಇಲ್ಲಿ ಎದುರಾಳಿಗಳು. ನಮ್ಮೊಳಗಿರುವ ಕೆಲವು ಜೀವಕೋಶಗಳೇ ತಮ್ಮ ನಿಯಮಗಳನ್ನು ಮುರಿದು ಸ್ವ ಇಚ್ಛೆಯಂತೆ ವರ್ತಿಸಿದಾಗ ಅದರ ನಿಯಂತ್ರಣಕ್ಕೆ ರೋಗ ನಿರೋಧಕ ವ್ಯವಸ್ಥೆ ಒಂದು ಸಂಘರ್ಷವನ್ನು ಮಾಡುತ್ತದೆ. ಆದರೆ ಆ ಸಂಘರ್ಷವನ್ನು ಕಟ್ಟಿಹಾಕಲು ರೋಗನಿರೋಧಕ ಶಕ್ತಿಗಳು ವಿಫಲವಾದಾಗ ಕ್ಯಾನ್ಸರ್ ಎನ್ನುವ ರಾಕ್ಷಸ ರೋಗ ದೇಹವನ್ನು ಆವರಿಸುತ್ತದೆ. ಆ ರೋಗದ ವಿರುದ್ಧ ಒಬ್ಬ ರೋಗಿಯ ಹೋರಾಟವೇ ಒಂದು ಮಹಾಯುದ್ಧ.
ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಖಚಿತವಾದ ಕೂಡಲೇ ಮೊದಲು ಕುಂದಿತವಾಗುವುದು ಅವನ ಆತ್ಮಸ್ಥೈರ್ಯ. ಆ ವ್ಯಕ್ತಿ ಬರೀ ತನ್ನ ದೇಹದ ಒಳಗೆ ಮಾತ್ರವಲ್ಲ ಮನಸ್ಸಿನ ಜೊತೆಯೂ ಒಂದು ಆಂತರಿಕ ಯುದ್ಧವನ್ನು ಮಾಡಬೇಕು. ಏನೇ ಆದರೂ ನಾನು ಸೋಲುವುದಿಲ್ಲ ಎನ್ನುವ ಶಪಥವನ್ನು ತನ್ನಲ್ಲಿ ತಾನೇ ಮಾಡಿಕೊಳ್ಳಬೇಕು. ಆ ವ್ಯಕ್ತಿಯೊಳಗಿರುವ ಬದುಕಬೇಕೆನ್ನುವ ಛಲ, ಯಾವ ಕಾರಣಕ್ಕೂ ಈ ಯುದ್ಧದಲ್ಲಿ ಸೋಲುವುದಿಲ್ಲ ಎನ್ನುವ ಆತ್ಮವಿಶ್ವಾಸವೇ ಅವನ ದೊಡ್ಡ ಆಯುಧ. ಈ ಆಯುಧದಿಂದಲೇ ಕ್ಯಾನ್ಸರ್ ಜಯಿಸಿದ ಅನೇಕ ನಿದರ್ಶನಗಳು ಇವೆ. ವಿವಿಧ ಬಗೆಯ ಚಿಕಿತ್ಸೆಗಳ ನಂತರ ಕ್ಯಾನ್ಸರ್ ಸಂಪೂರ್ಣ ಗುಣವಾಗಿದೆ” (Remission) ಅಥವಾ “ದೇಹದಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳಿಲ್ಲ” (No Evidence of Disease) ಎಂಬ ಮಾತುಗಳನ್ನು ಕೇಳಿದಾಗ ಅವರ ಜೀವನದಲ್ಲಿ ಹೊಸ ಭರವಸೆ ಮೂಡುತ್ತದೆ. ಈ ರಾಕ್ಷಸ ರೋಗದಿಂದ ಮುಕ್ತಿ ಪಡೆದ ಸಂತೃಪ್ತಿ ಅವರಲ್ಲಿರುತ್ತದೆ. ಆದರೆ ಒಮ್ಮೆ ಬಿಟ್ಟು ಹೋದ ಕ್ಯಾನ್ಸರ್ ಮತ್ತೆ ಮರುಕಳಿಸಿದರೆ ಏನು ಮಾಡುವುದು?
ಒಪ್ಪಿಕೊಳ್ಳುವುದು ಕಷ್ಟವೇ ಆದರೂ ಕ್ಯಾನ್ಸರ್ ಮರುಕಳಿಸುವಿಕೆ (Cancer Recurrence) ಎನ್ನುವುದು ವೈದ್ಯಕೀಯ ಲೋಕದ ಒಂದು ಕಠಿಣ ವಾಸ್ತವ. ಆಧುನಿಕ ಚಿಕಿತ್ಸಾ ವಿಧಾನಗಳು ಕ್ಯಾನ್ಸರ್ ಅನ್ನು ಬೇರುಸಮೇತ ಕಿತ್ತೊಗೆಯಲು ಕಠಿಣ ಪ್ರಯತ್ನಗಳನ್ನು ಮಾಡುತ್ತಿದೆ ಆದರೆ ಕೆಲವು ಕ್ಯಾನ್ಸರ್ ಕೋಶಗಳು ಅಂತಹ ಚಿಕಿತ್ಸೆಯಿಂದ ಬಚಾವಾಗಿ, ಕೆಲವು ತಿಂಗಳುಗಳು ಅಥವಾ ವರ್ಷಗಳ ನಂತರ ಮತ್ತೆ ಕಾಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ದೇಹದಿಂದ ಒಮ್ಮೆ ದೂರವಾದ ಕ್ಯಾನ್ಸರ್ ಮತ್ತೆ ಏಕೆ ಮರುಕಳಿಸುತ್ತದೆ, ಅದು ನಮ್ಮ ದೇಹದಲ್ಲಿ ಹೇಗೆ ವರ್ತಿಸುತ್ತದೆ ಮತ್ತು ಆಧುನಿಕ ವೈದ್ಯಕೀಯ ಜಗತ್ತು ಈ ಸಂದಿಗ್ಧವನ್ನು ಹೇಗೆ ಎದುರಿಸುತ್ತಿದೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಏನಿದು ಕ್ಯಾನ್ಸರ್ ಮರುಕಳಿಸುವಿಕೆ?
ಒಬ್ಬ ವ್ಯಕ್ತಿಯ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಜೀವಂತವಾಗಿದೆ ಎನ್ನುವುದು ಖಚಿತವಾದ ನಂತರದಲ್ಲಿ ಆ ಕ್ಯಾನ್ಸರ್ ನ ತೀವ್ರತೆ ಗೆ ಅನುಗುಣವಾಗಿ ಚಿಕಿತ್ಸೆಗಳು ನಡೆಯುತ್ತದೆ. ನಿರಂತರ ಚಿಕಿತ್ಸೆ ಮತ್ತು ಪರೀಕ್ಷೆಗಳ ತರುವಾಯವೂ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಪತ್ತೆಯಾಗದೇ ಇದ್ದಾಗ ಆ ವ್ಯಕ್ತಿಯನ್ನು ಕ್ಯಾನ್ಸರ್ ಮುಕ್ತ ಎಂದು ಪರಿಗಣಿಸಲಾಗುತ್ತದೆ. ಆದರೆ ನಿರ್ದಿಷ್ಟ ಅವಧಿಯ ಬಳಿಕ ಅದೇ ವ್ಯಕ್ತಿಯಲ್ಲಿ ಕ್ಯಾನ್ಸರ್ ಕೋಶಗಳು ಮತ್ತೆ ಕಾಣಿಸಿಕೊಳ್ಳುವುದನ್ನು “ಕ್ಯಾನ್ಸರ್ ಮರುಕಳಿಸುವಿಕೆ” ಎನ್ನಲಾಗುತ್ತದೆ. ಇದರರ್ಥ ಮೊದಲ ಬಾರಿ ನೀಡಿದ ಚಿಕಿತ್ಸೆ ಸಂಪೂರ್ಣ ವಿಫಲವಾಗಿದೆ ಎಂದಲ್ಲ; ಬದಲಿಗೆ, ಆರಂಭಿಕ ಚಿಕಿತ್ಸೆಯ ತೀವ್ರತೆಗೆ ಸಾಯದೆ ಉಳಿದುಕೊಂಡ ಅತ್ಯಂತ ಸೂಕ್ಷ್ಮ ಕೋಶಗಳು ಕಾಲಾನಂತರದಲ್ಲಿ ಮತ್ತೆ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ ಎಂದರ್ಥ.
ಇಲ್ಲಿ ನಾವು ಕ್ಯಾನ್ಸರ್ ಮರುಕಳಿಸುವಿಕೆ (Recurrence) ಮತ್ತು ಎರಡನೇ ಪ್ರಾಥಮಿಕ ಕ್ಯಾನ್ಸರ್ ನ (Second Primary Cancer) ನಡುವಿನ ವ್ಯತ್ಯಾಸವನ್ನು ತಿಳಿಯಬೇಕು:
- ಮರುಕಳಿಸುವಿಕೆ: ಇಲ್ಲಿ ಮೂಲ ಕ್ಯಾನ್ಸರ್ ಕೋಶಗಳೇ ಮತ್ತೆ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಸ್ತನ ಕ್ಯಾನ್ಸರ್ ಗುಣವಾದ ನಂತರ ಅದೇ ಕ್ಯಾನ್ಸರ್ ಕೋಶಗಳು ಶ್ವಾಸಕೋಶಕ್ಕೆ ಹರಡಿದರೆ, ಅದನ್ನು ಶ್ವಾಸಕೋಶದ ಕ್ಯಾನ್ಸರ್ ಎನ್ನದೆ ‘ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್’ ಎಂದು ಕರೆಯಲಾಗುತ್ತದೆ. ಇವೆರಡರ ಮೂಲವು ಒಂದೇ ಆಗಿದೆ
- ಎರಡನೇ ಪ್ರಾಥಮಿಕ ಕ್ಯಾನ್ಸರ್: ಇವುಗಳಿಗೆ ದೇಹದಲ್ಲಿ ಮೊದಲಿದ್ದ ಕ್ಯಾನ್ಸರ್ ನ ಜೊತೆ ಯಾವುದೇ ಸಂಬಂಧ ಇರುವುದಿಲ್ಲ. ದೇಹದಲ್ಲಿ ಸಂಪೂರ್ಣವಾಗಿ ಹೊಸ ಮಾದರಿಯ ಕ್ಯಾನ್ಸರ್ ಕಾಣಿಸಿಕೊಳ್ಳುವುದನ್ನು ಎರಡನೇ ಪ್ರಾಥಮಿಕ ಕ್ಯಾನ್ಸರ್ ಎನ್ನಬಹುದು.
ಕ್ಯಾನ್ಸರ್ ಮರುಕಳಿಸುವ ಬಗ್ಗೆ ವೈಜ್ಞಾನಿಕ ಲೋಕ ಹೇಳುವುದೇನು?
ಪ್ರಸ್ತುತ ವಿಜ್ಞಾನ ಲೋಕವು ಅತ್ಯಾಧುನಿಕ ಅವಿಷ್ಕಾರಗಳಾದ PET ಸ್ಕ್ಯಾನ್, MRI ಅಥವಾ CT ಸ್ಕ್ಯಾನ್ಗಳ ಮುಖಾಂತರ ಸೂಕ್ಷ್ಮ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುವುತ್ತಿದೆ. ಆದರೆ ಇಲ್ಲಿ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಇವುಗಳಿಗೂ ಕೆಲವು ಮಿತಿಗಳಿವೆ ಎನ್ನುವುದನ್ನು. ಈ ಆಧುನಿಕ ಪರೀಕ್ಷಾ ವಿಧಾನಗಳು ದೇಹದಲ್ಲಿ ಕನಿಷ್ಠ ಕೆಲವು ಮಿಲಿಮೀಟರ್ ಗಾತ್ರಕ್ಕೆ ಬೆಳೆದಿರುವ ಅಂದರೆ ಲಕ್ಷಾಂತರ ಜೀವಕೋಶಗಳಿರುವ ಗಡ್ಡೆಗಳನ್ನು ಮಾತ್ರ ಪತ್ತೆಹಚ್ಚಬಲ್ಲವು. ಸೂಕ್ತ ಚಿಕಿತ್ಸೆಯ ತರುವಾಯವೂ ಸಣ್ಣಪ್ರಮಾಣದ ಅಂದರೆ ನೂರಾರು ಅಥವಾ ಸಾವಿರಾರು ಸೂಕ್ಷ್ಮ ಕೋಶಗಳು ಉಳಿಯುವ ಸಾಧ್ಯತೆಗಳಿರುತ್ತದೆ. ಆ ಪ್ರಮಾಣವು ಅವು ಸ್ಕ್ಯಾನಿಂಗ್ ನಲ್ಲಿ ಪತ್ತೆಹಚ್ಚಲಾಗುವುದಿಲ್ಲ. ಹೀಗೆ ಉಳಿದುಕೊಂಡಿರುವ ಕ್ಯಾನ್ಸರ್ ಕೋಶಗಳು ಸದ್ದಿಲ್ಲದೇ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ತೊಡಗುತ್ತದೆ.
ಈ ಕ್ಯಾನ್ಸರ್ ಕೋಶಗಳು ಮತ್ತೆ ಮರುಕಳಿಸುವ ಮೂರು ಪ್ರಮುಖ ಕಾರಣಗಳು ಇಲ್ಲಿವೆ:
1. ಉಳಿದುಕೊಂಡಿರುವ ಸೂಕ್ಷ್ಮ ಕೋಶಗಳು (Minimal Residual Disease – MRD)
ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ನಾಶಪಡಿಸುವುದೇ ಮೊದಲ ಗುರಿಯಾಗಿರುವುತ್ತದೆ. ಈ ಕಾರಣಕ್ಕೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕ್ಯಾನ್ಸರ್ ಗಡ್ಡೆಯನ್ನಷ್ಟೇ ಅಲ್ಲದೆ ಅದು ಹರಡಿರುವ ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಗಳನ್ನು ತೆಗೆದುಹಾಕಲಾಗುತ್ತದೆ. ಉಳಿದಿರುವ ಕ್ಯಾನ್ಸರ್ ಕೋಶಗಳ ನಾಶಕ್ಕೆ ಕೀಮೋಥೆರಪಿ ಮತ್ತು ರೇಡಿಯೇಶನ್ ವಿಧಾನಗಳನ್ನು ಬಳಸಲಾಗುತ್ತದೆ. ಆದರೆ ಕ್ಯಾನ್ಸರ್ ಹರಡಲು ಹಾನಿಗೊಳಗಾದ ಒಂದು ಜೀವಕೋಶ ಸಾಕು. ಅಂತಹ ಕ್ಯಾನ್ಸರ್ ಕೋಶವು ರಕ್ತದ ಹರಿವು ಅಥವಾ ದುಗ್ಧರಸ ವ್ಯವಸ್ಥೆಯ (Lymphatic System) ಮೂಲಕ ತಪ್ಪಿಸಿಕೊಂಡು ಬಿಟ್ಟರೆ ಕಾಲಾನಂತರದಲ್ಲಿ ಹೊಸ ಗಡ್ಡೆಯಾಗಿ ರೂಪಾಂತರಗೊಳ್ಳುತ್ತದೆ.
2. ಸುಪ್ತಾವಸ್ಥೆಯಲ್ಲಿರುವ ಜೀವಕೋಶಗಳು (“Sleeper Cells”)
ಮನುಷ್ಯ ಹೇಗೆ ಬದುಕಲು ಒಂದು ದಾರಿಯನ್ನು ಹುಡುಕುತ್ತಾನೋ. ಈ ಕ್ಯಾನ್ಸರ್ ಕೋಶಗಳೂ ತಾನು ಬದುಕುಳಿಯಲು ರಹದಾರಿಯನ್ನು ಹುಡುಕುತ್ತಲೇ ಇರುತ್ತದೆ. ಕೆಲವು ಕ್ಯಾನ್ಸರ್ ಕೋಶಗಳು ಮೂಲ ಗಡ್ಡೆಯಿಂದ ಬೇರ್ಪಟ್ಟು ಮೂಳೆ ಮಜ್ಜೆ (Bone marrow), ಯಕೃತ್ತು (Liver) ಅಥವಾ ಶ್ವಾಸಕೋಶಕ್ಕೆ ವಲಸೆ ಹೋಗಿ ಅಲ್ಲಿ ‘ಸುಪ್ತಾವಸ್ಥೆ’ (Dormancy) ತಲುಪುತ್ತವೆ. ಅವುಗಳು ತನ್ನ ಅಸ್ತಿತ್ವದ ಬಗ್ಗೆ ಯಾವ ಸುಳಿವನ್ನು ಬಿಟ್ಟು ಕೊಡುವುದಿಲ್ಲ. ಇವು ವಿಭಜನೆಯಾಗದೆ ಸುಮ್ಮನೆ ಕುಳಿತಿರುವುದರಿಂದ, ವೇಗವಾಗಿ ವಿಭಜನೆಯಾಗುವ ಕೋಶಗಳನ್ನು ಮಾತ್ರ ಗುರಿಯಾಗಿಸುವ ಕೀಮೋಥೆರಪಿ ಅಥವಾ ರೇಡಿಯೇಶನ್ ಚಿಕಿತ್ಸೆಗಳ ಕಣ್ಣಿಗೂ ಬೀಳದೆ ನಾಶವಾಗುವುದರಿಂದ ತಪ್ಪಿಸಿಕೊಳ್ಳುತ್ತದೆ. ವರ್ಷಗಳ ನಂತರ ಸ್ವಾಭಾವಿಕವಾಗಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಇವು ಮತ್ತೆ ಜಾಗೃತಾವಸ್ಥೆಗೆ ಬಂದು ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತದೆ.
3. ಚಿಕಿತ್ಸಾ ಪ್ರತಿರೋಧಕ ಶಕ್ತಿ (Treatment Resistance)
ಕ್ಯಾನ್ಸರ್ ಗಡ್ಡೆಯ ಒಳಗಿನ ಎಲ್ಲಾ ಕೋಶಗಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಕೀಮೋಥೆರಪಿ ನೀಡಿದಾಗ ಶೇ. 99 ರಷ್ಟು ಕೋಶಗಳು ನಾಶವಾಗಬಹುದು. ಆದರೆ, ಜೀನ್ ರೂಪಾಂತರದ (Genetic Mutation) ಕಾರಣದಿಂದ ಕೆಲವು ಕೋಶಗಳು ಮೊದಲೇ ಆ ಔಷಧಿಗೆ ಪ್ರತಿರೋಧಕ ಶಕ್ತಿ ಹೊಂದಿರುತ್ತವೆ. ಅಂದರೆ ಹೇಗೆ ಜೀವಕ್ಕೆ ಸಹಜವಾಗಿ ರೋಗನಿರೋಧಕ ಶಕ್ತಿ ಇರುತ್ತದೋ ಹಾಗೆ ಈ ಕೋಶಗಳಿಗೆ ಚಿಕಿತ್ಸೆಯಲ್ಲಿ ನೀಡುವ ಔಷಧಿಗಳನ್ನು ನಿರೋಧಿಸುವ ಸಾಮರ್ಥ್ಯವಿರುತ್ತದೆ. ಇಂತಹ ಕೋಶಗಳು ಚಿಕಿತ್ಸೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡು, ಮುಂದೆ ಅದೇ ಔಷಧಿಗೆ ಕಗ್ಗಂಟಾಗುವ ಹೊಸ ಗಡ್ಡೆಯನ್ನು ಸೃಷ್ಟಿಸುತ್ತವೆ.
ಕ್ಯಾನ್ಸರ್ ಮರುಕಳಿಸುವಿಕೆಯ ಮೂರು ವಿಧಗಳು
ಕ್ಯಾನ್ಸರ್ ದೇಹದ ಯಾವ ಭಾಗದಲ್ಲಿ ಮರುಕಳಿಸುತ್ತದೆ ಎನ್ನುವ ಆಧಾರದ ಮೇಲೆ ಅವುಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ:
- ಸ್ಥಳೀಯ ಮರುಕಳಿಸುವಿಕೆ (Local Recurrence): ಕ್ಯಾನ್ಸರ್ ಮೊದಲು ಎಲ್ಲಿ ಉದ್ಭವವಾಗಿತ್ತೋ ಮತ್ತೆ ಅದೇ ಜಾಗದಲ್ಲಿ ಕಾಣಿಸಿಕೊಳ್ಳುವುದು. ಉದಾಹರಣೆಗೆ, ಸ್ತನದ ಗಡ್ಡೆಯನ್ನು ತೆಗೆದ ನಂತರವೂ ಮತ್ತೆ ಅದೇ ಭಾಗದಲ್ಲಿ ಕ್ಯಾನ್ಸರ್ ಬರುವುದು.
- ಪ್ರಾದೇಶಿಕ ಮರುಕಳಿಸುವಿಕೆ (Regional Recurrence): ಮೂಲ ಗಡ್ಡೆಯ ಸುತ್ತಮುತ್ತಲಿನ ಲಿಂಫ್ ನೋಡ್ಸ್ (Lymph Nodes) ಅಥವಾ ಅಂಗಾಂಗಗಳಲ್ಲಿ ಕ್ಯಾನ್ಸರ್ ಮರುಕಳಿಸುವುದು.
- ದೂರದ ಮರುಕಳಿಸುವಿಕೆ (Distant / Metastatic Recurrence): ಕ್ಯಾನ್ಸರ್ ಕೋಶಗಳು ರಕ್ತದ ಮೂಲಕ ದೇಹದ ಅತ್ಯಂತ ದೂರದ ಅಂಗಗಳಾದ ಮೆದುಳು, ಮೂಳೆಗಳು, ಯಕೃತ್ತು (Liver) ಅಥವಾ ಶ್ವಾಸಕೋಶಕ್ಕೆ ಹರಡುವುದು. ಇದು ಇಡೀ ದೇಹಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ ಇದಕ್ಕೆ ವ್ಯವಸ್ಥಿತ (Systemic) ಚಿಕಿತ್ಸೆಯ ಅಗತ್ಯವಿರುತ್ತದೆ.
ಮತ್ತೆ ಮರುಕಳಿಸುವ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಹೇಗೆ?
ಕ್ಯಾನ್ಸರ್ ಗುಣಮುಖವಾಗಿದೆ ಎಂದು ಖಚಿತವಾದ ನಂತರವೂ ನಿಯಮಿತ ತಪಾಸಣೆಗಳ ಮುಖೇನ ಇದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಒಳಿತು
- ನಿಯಮಿತ ವೈದ್ಯಕೀಯ ಪರೀಕ್ಷೆಗಳು: ಚಿಕಿತ್ಸೆಯ ನಂತರದಲ್ಲೂ ನಿಯಮಿತ ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗುವ ಮೂಲಕ.
- ಇಮೇಜಿಂಗ್ ಸ್ಕ್ಯಾನ್ಗಳು: CT ಸ್ಕ್ಯಾನ್, MRI, ಮತ್ತು PET ಸ್ಕ್ಯಾನ್ಗಳ ಮೂಲಕ ಕ್ಯಾನ್ಸರ್ ಗುಣವಾದ ತರುವಾಯವೂ ದೇಹದ ಒಳಗೆ ಗಡ್ಡೆಗಳು ಬೆಳೆಯುತ್ತಿವೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ.
- ರಕ್ತ ಪರೀಕ್ಷೆ (ಟ್ಯೂಮರ್ ಮಾರ್ಕರ್ಸ್): ಕೆಲವು ಕ್ಯಾನ್ಸರ್ಗಳು ರಕ್ತದಲ್ಲಿ ನಿರ್ದಿಷ್ಟ ಪ್ರೊಟೀನ್ಗಳನ್ನು ಬಿಡುಗಡೆ ಮಾಡುತ್ತವೆ. ಉದಾಹರಣೆಗೆ, ಅಂಡಾಶಯದ ಕ್ಯಾನ್ಸರ್ಗೆ CA-125, ಪ್ರೊಸ್ಟೇಟ್ ಕ್ಯಾನ್ಸರ್ಗೆ PSA, ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ಗೆ CEA ಪರೀಕ್ಷೆಗಳನ್ನು ನಡೆಸಿ, ಅವುಗಳ ಮಟ್ಟ ಹೆಚ್ಚಾಗುತ್ತಿದೆಯೇ ಎಂದು ಗಮನಿಸಲಾಗುತ್ತದೆ.
- ಲಿಕ್ವಿಡ್ ಬಯಾಪ್ಸಿ (Liquid Biopsy): ಇದು ಅತ್ಯಾಧುನಿಕ ರಕ್ತ ಪರೀಕ್ಷೆಯಾಗಿದ್ದು, ರಕ್ತದಲ್ಲಿ ಹರಡಿರುವ ಕ್ಯಾನ್ಸರ್ ಕೋಶಗಳ ಡಿಎನ್ಎ (ctDNA) ತುಣುಕುಗಳನ್ನು ಪತ್ತೆ ಮಾಡುತ್ತದೆ. ಸ್ಕ್ಯಾನಿಂಗ್ನಲ್ಲಿ ಗಡ್ಡೆ ಕಾಣಿಸಿಕೊಳ್ಳುವ ತಿಂಗಳುಗಳ ಮುಂಚೆಯೇ ಇದು ಮರುಕಳಿಸುವಿಕೆಯ ಸೂಚನೆ ನೀಡಬಲ್ಲದು.
ಕ್ಯಾನ್ಸರ್ ಮರುಕಳಿಕೆಯ ಪ್ರಮುಖ ಲಕ್ಷಣಗಳು:
ಈ ಕೆಳಕಂಡ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು:
- ಚಿಕಿತ್ಸೆ ಪಡೆದ ಜಾಗದಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ಹೊಸದಾಗಿ ಗಡ್ಡೆಗಳು ಕಾಣಿಸಿಕೊಳ್ಳುವುದು.
- ನಿರಂತರವಾಗಿ ಮತ್ತು ಕಾರಣವಿಲ್ಲದೆ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು..
- ಹಸಿವಾಗದಿರುವುದು ಮತ್ತು ತೂಕದಲ್ಲಿ ತೀವ್ರ ಇಳಿಕೆ.
- ನಿರಂತರ ಕೆಮ್ಮು ಅಥವಾ ಉಸಿರಾಟದ ತೊಂದರೆ.
- ಪದೇ ಪದೇ ಕಾಣಿಸಿಕೊಳ್ಳುವ ಜ್ವರ ಅಥವಾ ರಾತ್ರಿಯ ವೇಳೆ ಅತಿಯಾಗಿ ಬೆವರುವುದು.
ಮರುಕಳಿಸಿದ ಕ್ಯಾನ್ಸರ್ಗೆ ಲಭ್ಯವಿರುವ ಆಧುನಿಕ ಚಿಕಿತ್ಸಾ ವಿಧಾನಗಳು
ಕ್ಯಾನ್ಸರ್ ಮತ್ತೆ ಬಂದಿದೆ ಎನ್ನುವುದು ಮಾನಸಿಕವಾಗಿ ಆಘಾತ ನೀಡಬಹುದು, ಆದರೆ ಇಂದು ವೈದ್ಯಕೀಯ ರಂಗದಲ್ಲಿ ಇದಕ್ಕೆ ಹತ್ತಾರು ಸುಧಾರಿತ ಚಿಕಿತ್ಸೆಗಳು ಲಭ್ಯವಿವೆ.
1. ರೋಬೋಟಿಕ್ ಮತ್ತು ಸುಧಾರಿತ ಶಸ್ತ್ರಚಿಕಿತ್ಸೆ
ಕ್ಯಾನ್ಸರ್ ಸ್ಥಳೀಯವಾಗಿ (ಒಂದೇ ಜಾಗದಲ್ಲಿ) ಮರುಕಳಿಸಿದ್ದರೆ, ಸುಧಾರಿತ ರೋಬೋಟಿಕ್ ಸರ್ಜರಿ ಮೂಲಕ ಸುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ಆ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು.
2. ಸ್ಟೀರಿಯೋಟಾಕ್ಟಿಕ್ ರೇಡಿಯೇಶನ್ (SBRT)
ಒಮ್ಮೆ ರೇಡಿಯೇಶನ್ ಪಡೆದ ಜಾಗಕ್ಕೆ ಮತ್ತೊಮ್ಮೆ ಸಾಂಪ್ರದಾಯಿಕ ರೇಡಿಯೇಶನ್ ನೀಡುವುದು ಅಪಾಯಕಾರಿ. ಆದರೆ ಇಂದಿನ SBRT (Stereotactic Body Radiotherapy) ಅಥವಾ ಪ್ರೋಟಾನ್ ಥೆರಪಿಯಂತಹ ತಂತ್ರಜ್ಞಾನಗಳು, ಮಿಲಿಮೀಟರ್ ಕರಾರುವಾಕ್ ಜಾಗಕ್ಕೆ ಮಾತ್ರ ಅತಿ ಹೆಚ್ಚಿನ ಪ್ರಮಾಣದ ವಿಕಿರಣವನ್ನು ಹಾಯಿಸಿ, ಸುತ್ತಲಿನ ಅಂಗಗಳನ್ನು ರಕ್ಷಿಸುತ್ತವೆ.
3. ಹೊಸ ಮಾದರಿಯ ಕೀಮೋಥೆರಪಿ
ಹಳೆಯ ಕೀಮೋಥೆರಪಿ ಔಷಧಗಳಿಗೆ ಕ್ಯಾನ್ಸರ್ ಕೋಶಗಳು ಪ್ರತಿರೋಧ ಶಕ್ತಿ ಬೆಳೆಸಿಕೊಂಡಿದ್ದರೆ, ವೈದ್ಯರು ಬೇರೆ ರೀತಿಯ ಅಥವಾ ವಿಭಿನ್ನ ಕಾಂಬಿನೇಷನ್ನ ಬಲಿಷ್ಠ ಕೀಮೋ ಔಷಧಗಳನ್ನು ಬಳಸುತ್ತಾರೆ.
4. ಟಾರ್ಗೆಟೆಡ್ ಥೆರಪಿ (Targeted Therapy)
ಇದು ಸಾಮಾನ್ಯ ಜೀವಕೋಶಗಳಿಗೆ ತೊಂದರೆ ನೀಡದೆ, ಕೇವಲ ಕ್ಯಾನ್ಸರ್ ಕೋಶಗಳಲ್ಲಿನ ನಿರ್ದಿಷ್ಟ ಜೆನೆಟಿಕ್ ಮ್ಯುಟೇಷನ್ಗಳನ್ನು (ಉದಾಹರಣೆಗೆ HER2, EGFR, BRCA ಜೀನ್ಗಳು) ಗುರಿಯಾಗಿಸಿ ಅವುಗಳನ್ನು ನಾಶಪಡಿಸುವ ಸ್ಮಾರ್ಟ್ ಔಷಧಗಳಾಗಿವೆ.
5. ಇಮ್ಯುನೊಥೆರಪಿ (Immunotherapy)
ಕ್ಯಾನ್ಸರ್ ಕೋಶಗಳು ದೇಹದ ರೋಗನಿರೋಧಕ ಶಕ್ತಿಯ ಕಣ್ಣಿಗೆ ಬೀಳದಂತೆ ರಕ್ಷಣಾ ಕವಚವನ್ನು ಹೊಂದಿರುತ್ತವೆ. ಇಮ್ಯುನೊಥೆರಪಿ ಔಷಧಗಳು ಈ ಕವಚವನ್ನು ಸೀಳಿ, ನಮ್ಮ ದೇಹದ ಸ್ವಂತ ಟಿ-ಕೋಶಗಳು (T-cells) ಕ್ಯಾನ್ಸರ್ ಕೋಶಗಳನ್ನು ಗುರುತಿಸಿ ಬೇಟೆಯಾಡುವಂತೆ ಮಾಡುತ್ತವೆ. ಇದು ಇತ್ತೀಚಿನ ವರ್ಷಗಳ ಅತ್ಯಂತ ಕ್ರಾಂತಿಕಾರಿ ಚಿಕಿತ್ಸೆಯಾಗಿದೆ.
6. ಕ್ಲಿನಿಕಲ್ ಟ್ರಯಲ್ಸ್ (Clinical Trials)
ಯಾವ ಚಿಕಿತ್ಸೆಗೂ ಬಗ್ಗದ ಕ್ಯಾನ್ಸರ್ಗಳಿಗೆ ಜಗತ್ತಿನಾದ್ಯಂತ ನಡೆಯುತ್ತಿರುವ ಹೊಸ ಸಂಶೋಧನಾ ಚಿಕಿತ್ಸೆಗಳು (CAR-T ಸೆಲ್ ಥೆರಪಿ ಇತ್ಯಾದಿ) ಕ್ಲಿನಿಕಲ್ ಟ್ರಯಲ್ಸ್ ಮೂಲಕ ಲಭ್ಯವಿರುತ್ತವೆ.
ಮರುಕಳಿಸುವ ಕ್ಯಾನ್ಸರ್ ತಡೆಗೆ ರಸಾಯನ ಆಯುರ್ವೇದ ಚಿಕಿತ್ಸೆ!
ಕ್ಯಾನ್ಸರ್ ಮರುಕಳಿಸುವಿಕೆ ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಕುಗ್ಗಿಸುತ್ತದೆ. ಆದರೆ ಒಮ್ಮೆ ಜಯಿಸಿದ ಕ್ಯಾನ್ಸರ್ ವಿರುದ್ದದ ಯುದ್ಧವನ್ನು ಮತ್ತೆ ಜಯಿಸಲು ರೋಗಿಗಳಿಗೆ ಬೇಕಾಗಿರುವುದು ಸೂಕ್ತ ಚಿಕಿತ್ಸೆ, ಆರೈಕೆ ಮತ್ತು ಆತ್ಮಸ್ಥೈರ್ಯ.
ರಸಾಯನ ಚಿಕಿತ್ಸಾ ಪದ್ದತಿಯು ಆಯುರ್ವೇದದ ಅಷ್ಟಾಂಗ ಅಂದರೆ ಎಂಟು ಶಾಖೆಗಳಲ್ಲಿ ಒಂದಾಗಿದ್ದು ರೋಗಿಯ ದೈಹಿಕ ಅರೋಗ್ಯ ಮಾತ್ರವಲ್ಲ ಮಾನಸಿಕ ಸ್ವಾಸ್ಥ್ಯದ ರಕ್ಷಣೆಯನ್ನೂ ಮಾಡುತ್ತದೆ. ಈಗಾಗಲೇ ಒಂದು ಬಾರಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮತ್ತೆ ಅದರ ದಾಳಿಗೊಳಗಾದವರ ಮನಸ್ಥಿತಿ ದುರ್ಬಲವಾಗಿರುತ್ತದೆ. ಅಂತಹ ವ್ಯಕ್ತಿಗಳಿಗೆ ಚೈತನ್ಯದ ಅವಶ್ಯಕತೆ ಇರುತ್ತದೆ. ರಸಾಯನ ಆಯುರ್ವೇದವವು ರೋಗದ ವಿರುದ್ಧ ಹೋರಾಡುವುದಷ್ಟೇ ಅಲ್ಲದೆ ರೋಗಿಗಳಿಗೆ ಪುನರ್ಚೈತನ್ಯವನ್ನು ಕರುಣಿಸುತ್ತದೆ. ಅಷ್ಟೇ ಅಲ್ಲದೆ ಇತರ ಜೇವಕೋಶಗಳಿಗೆ ಹಾನಿಮಾಡದೆ ದೇಹದ ಒಳಗೆ ಸುಪ್ತವಾಗಿ ಅಡಗಿ ಕುಳಿತು ಮತ್ತೆ ಮತ್ತೆ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳನ್ನು ಕೊಲ್ಲುವ ಕೆಲಸವನ್ನು ಮಾಡಲು ಶಕ್ತವಾಗಿದೆ.
ಉಪಸಂಹಾರ
ಕ್ಯಾನ್ಸರ್ ನ ಜೊತೆಗಿನ ಹೋರಾಟದಲ್ಲಿ ಒಬ್ಬ ವ್ಯಕ್ತಿ ದೈಹಿಕವಾಗಿ ಕ್ಷೀಣಿಸುತ್ತಾ ಹೋದರೂ ಮಾನಸಿಕವಾಗಿ ಕುಗ್ಗಬಾರದು. ಚಿಕಿತ್ಸೆಗೆ ದೇಹ ಸ್ಪಂದಿಸಲು ಮನಸ್ಸೇ ಇಂಧನ. ಹೀಗಾಗಿ ಕ್ಯಾನ್ಸರ್ ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಮರಳಿದ ಕ್ಯಾನ್ಸರ್ ಗೆ ಭಯ ಪಡದೆ ಮತ್ತೆ ಎದುರಿಸುವ ಧೈರ್ಯ ತೋರೋಣ.
ಕಳೆದ ಅನೇಕ ವರ್ಷಗಳಿಂದ ಪುನರ್ಜನ್ ಆಯುರ್ವೇದವು ರಸಾಯನ ಚಿಕಿತ್ಸ ವಿಧಾನದ ಮೂಲಕ ಅನೇಕ ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದು, ಪುನರ್ಜನ್ ಸಹಾಯದಿಂದ ಕ್ಯಾನ್ಸರ್ ನಿಂದ ಸಂಪೂರ್ಣ ಮುಕ್ತಿ ಪಡೆದ ಅನೇಕರ ಅನುಭವದ ಮಾತುಗಳು ಪುನರ್ಜನ್ ಯೂಟ್ಯೂಬ್ ವಾಹಿನಿಯಲ್ಲಿ ಲಭ್ಯವಿದೆ.
Reference
https://www.cancer.org/cancer/survivorship/recurrence/cancer-recurrence-rates.html
https://www.cancer.gov/types/recurrent-cancer





















