ರಸಾಯನಿಕ ಆಯುರ್ವೇದ ಚಿಕಿತ್ಸೆ ಮತ್ತು ನಿಯಮಿತ ಆಯುರ್ವೇದ ಚಿಕಿತ್ಸೆಯ ನಡುವಿನ ವ್ಯತ್ಯಾಸವೇನು?

You are currently viewing ರಸಾಯನಿಕ ಆಯುರ್ವೇದ ಚಿಕಿತ್ಸೆ ಮತ್ತು ನಿಯಮಿತ ಆಯುರ್ವೇದ ಚಿಕಿತ್ಸೆಯ ನಡುವಿನ ವ್ಯತ್ಯಾಸವೇನು?

ಆಯುರ್ವೇದ ಮತ್ತು ರಸಾಯನ ಆಯುರ್ವೇದವು ಬೇರೆ ಬೇರೆ ಅಲ್ಲ. ಅಥರ್ವಣ ವೇದದ ಉಪವೇದವಾದ ಆಯುರ್ವೇದದಲ್ಲಿ ರಸಾಯನ ಆಯುರ್ವೇದ ಮತ್ತೊಂದು ಉಪವೇದ ಮಾತ್ರ. ರಸಾಯನ ಆಯುರ್ವೇದವು ಆಯುರ್ವೇದದ ಎಂಟು ಶಾಖೆಗಳಲ್ಲಿ ಒಂದಾಗಿದೆ. ಜಗತ್ತು ನಾಗರೀಕತೆಗೆ ತೆರೆದುಕೊಳ್ಳುವ ಮುನ್ನವೇ ಭಾರತದಲ್ಲಿ ಆಯುರ್ವೇದವು ತನ್ನ ಪ್ರಾಬಲ್ಯವನ್ನು ಸಾಧಿಸಿತ್ತು. ಆದಿ ಕಾಲದಲ್ಲೇ ಆಯುರ್ವೇದವು ವಿವಿಧ ಚಿಕಿತ್ಸಾ ವಿಧಾನಗಳನ್ನು ವಿಂಗಡಿಸುತ್ತಾ ಸಾಗಿತ್ತು. ಅವುಗಳನ್ನು ನೋಡುವುದಾದರೆ. ದೇಹಕ್ಕೆ ಒದಗಿಸುವ ಸಾಮಾನ್ಯ ಔಷಧ ಪ್ರಯೋಗದ ಹೆಸರು ಕಾಯ ಚಿಕಿತ್ಸೆ. ಬಾಧಿತ ಅಂಗಗಳನ್ನು ಪರಿಶೀಲಿಸಿ ಅದಕ್ಕೆ ನೀಡುವ ಸೂಕ್ತ ವಿಜ್ಞಾನ ಚಿಕಿತ್ಸೆಯೇ ಶಸ್ತ್ರಚಿಕಿತ್ಸೆ. ಕಿವಿ, ಮೂಗು ಮತ್ತು ಗಂಟಲು ವಿಭಾಗದ ಚಿಕಿತ್ಸೆಯೇ ಶಾಲಾಕ್ಯ. ಪ್ರೌಢಾವಸ್ಥೆ ತಲುಪುವ ಮುನ್ನ ಮಗುವಿನ ಆರೋಗ್ಯದ ಕಾಳಜಿಯೇ ಶಿಶುವೈದ್ಯಶಾಸ್ತ್ರ. ವಾಜೀಕಾರವೆಂದರೆ sexology, ಭೂತ ಚಿಕಿತ್ಸೆಯು microbiology. ಅಗದ ಅಂದರೆ toxic science. ಹೀಗೆ ಹಲವು ಪ್ರಕಾರಗಳಲ್ಲಿ ರೋಗಗಳನ್ನು ವಿಂಗಡಿಸಿ ಅದಕ್ಕೆ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಆಯುರ್ವೇದ ಶತಮಾನಗಳಿಂದ ಮಾಡುತ್ತಲೇ ಬಂದಿದೆ.

ಇವುಗಳಲ್ಲಿ ರಸಾಯನ ಆಯುರ್ವೇದವು ವಿಶೇಷವಾಗಿ ರೋಗನಿರೋಧಕ ಶಕ್ತಿಗೆ ಹೆಸರುವಾಸಿಯಾಗಿದೆ. ಆಯುರ್ವೇದ ಅಥವಾ ಆಯುಷ್ಯಾಸ್ತ್ರ ಮುಖ್ಯವಾಗಿ ದೇಹ ಮತ್ತು ಮನಸ್ಸಿನ ಸುಧಾರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಆತ್ಮದ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಆಹಾರ, ಪ್ರಯಾಣ ಮತ್ತು ವ್ಯವಹಾರಗಳ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಈ ಚಿಕಿತ್ಸಾ ವಿಧಾನ ಹೊಂದಿದೆ. ಇವಷ್ಟೇ ಅಲ್ಲದೆ ರಸಾಯನ ಆಯುರ್ವೇದವು ಇನ್ನಷ್ಟು ಸಂಕೀರ್ಣವಾದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ನೀಡುತ್ತದೆ. ಕ್ಯಾನ್ಸರ್ ನಂತಹ ಮಾರಕ ರೋಗಗಳು ದೇಹದ ಪ್ರತಿರೋಧಕ ವ್ಯವಸ್ಥೆಯು ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುವಂತೆ ಮಾಡುತ್ತದೆ. ಇದು ಸಾಮಾನ್ಯವಾಗಿ ರೋಗ ಹರಡಿದಾಗ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಒಂದೆಡೆ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸದೆ, ಅದಕ್ಕೆ ಮರು ಚೈತನ್ಯವನ್ನು ಕರುಣಿಸಿ, ರೋಗದ ವಿರುದ್ಧ ಯುದ್ಧ ಮಾಡುವ ಶಕ್ತಿಯನ್ನು ತನ್ನ ಚಿಕಿತ್ಸೆಯ ಮೂಲಕ ನೀಡುವುದೇ ರಸಾಯನ ಆಯುರ್ವೇದದ ವಿಶೇಷತೆ.

Also read : ರಾಸಾಯನಿಕ ಆಯುರ್ವೇದವು ಕ್ಯಾನ್ಸರ್ ಕೋಶಗಳ ವಿರುದ್ಧ ಹೇಗೆ ಹೋರಾಡುತ್ತದೆ?

Disclaimer:

This content is for informational purposes only. Read full disclaimer [here]