ರಸಾಯನ ಆಯುರ್ವೇದವು ಇತರ ಕ್ಯಾನ್ಸರ್ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆಯೇ?

You are currently viewing ರಸಾಯನ ಆಯುರ್ವೇದವು ಇತರ ಕ್ಯಾನ್ಸರ್ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆಯೇ?

ರಸಾಯನ ಆಯುರ್ವೇದ ಎಂದರೆ ಪುನರುಜ್ಜೀವನ. ರಸಾಯನ ಆಯುರ್ವೇದವು ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸುವ ಮೂಲಕ ದೇಹಕ್ಕೆ ಹೊಸ ಜೀವವನ್ನು ನೀಡುತ್ತದೆ ಮತ್ತು ಇತರ ಚಿಕಿತ್ಸೆಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರು ಭಯಪಡುವ ಮೊದಲ ಸಂಗತಿ ಎಂದರೆ ಅದರ ದುಷ್ಪರಿಣಾಮಗಳು. ಯಾವುದೇ ರೀತಿಯ ಚಿಕಿತ್ಸೆಯ ದುಷ್ಪರಿಣಾಮಗಳ ಭಯ ಸಹಜವಾಗಿಯೇ ರೋಗಿಗಳನ್ನು ಕಾಡುತ್ತದೆ. ರಸಾಯನ ಆಯುರ್ವೇದವು ಕ್ಯಾನ್ಸರ್ ಗೆ ಮಾತ್ರವಲ್ಲ ಬದಲಿಗೆ ಆ ರೋಗವನ್ನು ತ್ವರಿತವಾಗಿ ಮಣಿಸಲು ಉಪಯೋಗಿಸಿದ ಚಿಕಿತ್ಸೆಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕೂಡಾ ಕ್ರಮೇಣ ಗುಣಪಡಿಸುತ್ತದೆ. ರಸಾಯನ ಆಯುರ್ವೇದವು ಕ್ಯಾನ್ಸರ್ ಕೋಶಗಳ ವಿರುದ್ಧ ಸಮಾನಾಂತರವಾಗಿ ಹೋರಾಡುತ್ತದೆ ಮತ್ತು ದುಷ್ಪರಿಣಾಮಗಳಿಂದ ಹಾನಿಗೊಳಗಾದ ರೋಗಿಯ ದೇಹದ ಸ್ಥಿತಿಗಳನ್ನು ಮತ್ತು ಅಂಗಗಳನ್ನು ಪುನಃಸ್ಥಾಪಿಸುತ್ತದೆ.

ರಸಾಯನ ಆಯುರ್ವೇದವು ಯಾವುದೇ ಕ್ಯಾನ್ಸರ್ ರೋಗಿಯ ಅಂಗಾಂಗಗಳಿಗೆ ಹಾನಿಯಾಗದಂತೆ ಎಂಥಹ ಸ್ಥಿತಿಯಲ್ಲಿ ಕೂಡಾ ಪುನರ್ಜನ್ಮ ನೀಡಬಹುದು. ಅದಕ್ಕಾಗಿಯೇ ರಸಾಯನ ಆಯುರ್ವೇದ ಔಷಧವನ್ನು ದೈವೀಕ ಔಷಧಿ ಎಂದೂ ಕರೆಯುತ್ತಾರೆ. ಜನಸಾಮಾನ್ಯರಿಗೆ ಕ್ಯಾನ್ಸರ್ ರೋಗದ ಮೇಲೆ ಇರುವ ಅಪರಿಮಿತ ಭಯಕ್ಕೆ ಮುಖ್ಯ ಕಾರಣವೇನಂದರೆ ಸರಿಯಾದ ಮಾಹಿತಿಯ ವಿನಃ ತೆಗೆದುಕೊಳ್ಳುವ ಕ್ಯಾನ್ಸರ್ ಚಿಕಿತ್ಸೆಗಳು ಎಂದು ಅನೇಕ ಅಧ್ಯಯನಗಳು ಸಾಬೀತು ಪಡಿಸಿದೆ. ಕ್ಯಾನ್ಸರ್ ಅನ್ನು ತ್ವರಿತವಾಗಿ ತೊಲಗಿಸುವ ಉದ್ದೇಶದಲ್ಲಿ ತೆಗೆದುಕೊಳ್ಳುವ ಆಧುನಿಕ ಚಿಕಿತ್ಸಾ ಪ್ರಕ್ರಿಯೆಯು ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ವಿಫಲವಾದ ಅನೇಕ ನಿದರ್ಶನಗಳಿವೆ. ಅಷ್ಟೇ ಅಲ್ಲದೆ ಕ್ಯಾನ್ಸರ್ ಕೋಶಗಳಿಗೆ ಚಿಕಿತ್ಸೆ ನೀಡುವ ಪ್ರಕ್ರಿಯೆಯಲ್ಲಿ ಆರೋಗ್ಯಕರ ಕೋಶಗಳನ್ನು ಹಾನಿಗೊಳಿಸುವುದು ಮತ್ತು ದೇಹದ ಸ್ಥಿತಿಯನ್ನು ಗಮನಿಸದೆ ನಿರ್ಣಾಯಕ ಚಿಕಿತ್ಸೆಗಳನ್ನು ನೀಡುವುದರಿಂದ ದೇಹದ ರೋಗ ನಿರೋಧಕ ಶಕ್ತಿಯು ಕಡಿಮೆ ಆಗುವಂತಹ ದುಷ್ಪರಿಣಾಮಗಳು ಉಂಟಾಗುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಒಮ್ಮೆ ಶಕ್ತಿ ಕಳೆದುಕೊಂಡರೆ ಎಷ್ಟೇ ಗುಣಮಟ್ಟದ ಚಿಕಿತ್ಸೆ ನೀಡಿದರೂ ದೇಹವು ಚಿಕಿತ್ಸೆಗೆ ಸ್ಪಂದನೆ ಕೊಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುವ, ದೇಹಕ್ಕೆ ನವ ಚೈತನ್ಯ ನೀಡುವ ಔಷಧ ಯಾವುದಾದರೂ ಇದೆ ಎಂದರೆ ಅದು ರಸಾಯನ ಆಯುರ್ವೇದ ಮಾತ್ರ.

Also read : ರಾಸಾಯನಿಕ ಆಯುರ್ವೇದ ಔಷಧ ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ?

Disclaimer:

This content is for informational purposes only. Read full disclaimer [here]