ಈ ರಸಾಯನ ಆಯುರ್ವೇದ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ಚಿಕಿತ್ಸೆಗಳೊಂದಿಗೆ ತೆಗೆದುಕೊಳ್ಳಬಹುದೇ?

You are currently viewing ಈ ರಸಾಯನ ಆಯುರ್ವೇದ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ಚಿಕಿತ್ಸೆಗಳೊಂದಿಗೆ ತೆಗೆದುಕೊಳ್ಳಬಹುದೇ?

ಕ್ಯಾನ್ಸರ್ ಚಿಕಿತ್ಸೆಯಲ್ಲಿ ರಸಾಯನ ಆಯುರ್ವೇದದ ಬಗ್ಗೆ ಮುಖ್ಯವಾಗಿ ಅರಿತುಕೊಳ್ಳಲೇ ಬೇಕಾದ ಸಂಗತಿ ಎಂದರೆ, ರಸಾಯನ ಆಯುರ್ವೇದವು ಕ್ಯಾನ್ಸರ್ ಬಾಧಿತರಿಗೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಈ ಔಷಧ ವಿಧಾನದಿಂದ ದೇಹದ ಮೇಲೆ ಯಾವುದೇ ಹಾನಿ ಇಲ್ಲ ಎನ್ನುವುದು. ಈ ಕಾರಣಕ್ಕಾಗಿಯೇ ಅನೇಕ ವೈದ್ಯರು ಯಾವ ರೀತಿಯ ಚಿಕಿತ್ಸೆ ಪಡೆಯುತ್ತಿದ್ದರೂ ರಸಾಯನ ಆಯುರ್ವೇದ ಔಷಧವನ್ನು ಅನುಪಾನವಾಗಿ ಅಥವಾ ಅದಕ್ಕೆ ಪೂರಕವಾಗಿ ಆಶ್ರಯಿಸಿದರೆ ರೋಗದ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಜೊತೆಗೆ ಇತರ ಚಿಕಿತ್ಸೆಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಎನ್ನುವ ಸಲಹೆಯನ್ನು ನೀಡುತ್ತಾರೆ.

ಆಂಕೊಲಾಜಿಸ್ಟ್ (ಕ್ಯಾನ್ಸರ್ ತಜ್ಞರು) ಗಳು ಕ್ಯಾನ್ಸರ್ ರೋಗಿಗಳಿಗೆ ಮುಖ್ಯವಾಗಿ ತಿಳಿಹೇಳುವ ಸಂಗತಿ ಎಂದರೆ ಈಗಾಗಲೇ ಒಂದು ಬಗೆಯ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ ಪರ್ಯಾಯವಾಗಿ ಇನ್ನೊಂದು ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದಲ್ಲ ಎನ್ನುವುದು. ಆದರೆ ರಸಾಯನ ಆಯುರ್ವೇದವು ಈ ಮಾತಿಗೆ ಭಿನ್ನವಾಗಿದೆ. ರಸಾಯನ ಪದ್ದತಿಯಲ್ಲಿ ರೋಗಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕ್ಯಾನ್ಸರ್ ನ ಸ್ಥಿತಿಯನ್ನು ಮೊದಲು ಗುರುತಿಸಲಾಗುತ್ತದೆ ಮತ್ತು ಕಾಂಡಕೋಶಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗದ ಮೂಲ ಕಾರಣವನ್ನು ಗುರುತಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿ, ಕ್ಯಾನ್ಸರ್ ಕೋಶಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸುತ್ತದೆ. ಇಷ್ಟೇ ಅಲ್ಲದೆ ರಸಾಯನ ಆಯುರ್ವೇದವು ಈ ಹಿಂದೆ ಸೇವಿಸಿದ ಔಷಧಗಳ ದುಷ್ಪರಿಣಾಮಗಳನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ರಸಾಯನ ಆಯುರ್ವೇದವು ಕ್ಯಾನ್ಸರ್ ಅನ್ನು ಕಡಿಮೆ ಮಾಡುವುದರ ಜೊತೆಗೆ ರೋಗಿಯ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕ್ರಮೇಣ ಹೆಚ್ಚಿಸುತ್ತದೆ.

Also read : ರಸಾಯನ ಆಯುರ್ವೇದವು ಕ್ಯಾನ್ಸರ್ ಅನ್ನು ಯಾವ ಹಂತದವರೆಗೆ ಚಿಕಿತ್ಸೆ ನೀಡುತ್ತದೆ?

Disclaimer:

This content is for informational purposes only. Read full disclaimer [here]